CIBIL ಸ್ಕೋರ್ ಫ್ರೀ ಚೆಕ್ + ತಪ್ಪು ಸರಿಪಡಿಸೋದುCIBIL SCORE CHECK FREE IN KANNADA · HOW-TO #3 · CHECKLIST
CIBIL ರಿಪೋರ್ಟ್ ಫ್ರೀ. ತಪ್ಪಿದ್ರೆ ಸರಿಪಡಿಸೋದೂ ಫ್ರೀ.
ನೀವು ತಗೊಳ್ಳದ ಲೋನ್ ನಿಮ್ಮ ರಿಪೋರ್ಟ್‌ನಲ್ಲಿ ಇದ್ರೆ ಮುಂದಿನ ಲೋನ್ ರಿಜೆಕ್ಟ್ ಆಗಬಹುದು. ನೆನಪಿಡಿ: ವರ್ಷಕ್ಕೆ ಒಂದು ಫ್ರೀ ಫುಲ್ ರಿಪೋರ್ಟ್ · ಡಿಸ್ಪ್ಯೂಟ್ ಫ್ರೀ · 30 ದಿನ ಗಡುವು.
A loan you never took can get your next loan rejected. Remember: one free full report a year, disputes are free, 30-day limit. Every point is from RBI rules and CIBIL's own pages.
ನಿಯಮಗಳು 6 Nov 2026 ರಂತೆ — ಪ್ರಕಟಿಸೋ ಮುನ್ನ ಮತ್ತೆ ಚೆಕ್ ಮಾಡಲಾಗಿದೆ · Rules as on 6 Nov 2026 — re-checked before publishing.
ವರ್ಷಕ್ಕೆ 1 ಫ್ರೀ ರಿಪೋರ್ಟ್ — ಪ್ರತಿ ಬ್ಯೂರೋದಿಂದ
✅ RBI ನಿಯಮ: ಪ್ರತಿ ಕ್ರೆಡಿಟ್ ಬ್ಯೂರೋ ಜನವರಿ–ಡಿಸೆಂಬರ್‌ನಲ್ಲಿ ಒಂದು ಸಲ ಸ್ಕೋರ್ ಸಮೇತ ಫುಲ್ ರಿಪೋರ್ಟ್ ಫ್ರೀ ಕೊಡಬೇಕು; ಲಿಂಕ್ ಅವರ ಹೋಮ್ ಪೇಜ್‌ನಲ್ಲೇ ಇರಬೇಕು.
🏦 RBI ನೋಂದಾಯಿತ 4 ಬ್ಯೂರೋ: TransUnion CIBIL, Experian, Equifax, CRIF → ವರ್ಷಕ್ಕೆ 4 ಫ್ರೀ ರಿಪೋರ್ಟ್.
💳 ಫ್ರೀ ರಿಪೋರ್ಟ್‌ಗೆ ಹಣ ಕಟ್ಟಬೇಕಿಲ್ಲ; ಪೇಯ್ಡ್ ಪ್ಲಾನ್ ನಿಮ್ಮ ಆಯ್ಕೆ ಮಾತ್ರ.
📊 ಸ್ಕೋರ್ 300–900; 900ಕ್ಕೆ ಹತ್ತಿರ ಇದ್ದಷ್ಟು ಲೋನ್/ಕಾರ್ಡ್ ಸಿಗೋ ಚಾನ್ಸ್ ಜಾಸ್ತಿ.
📅 2026ರಲ್ಲಿ ತಗೊಂಡಿದ್ರೆ ಮುಂದಿನ ಫ್ರೀ ರಿಪೋರ್ಟ್ 1 ಜನವರಿ 2027ರಿಂದ.
ℹ️ ಕಳೆದ 36 ತಿಂಗಳು ಯಾವ ಲೋನ್/ಕಾರ್ಡ್ ಇಲ್ಲದಿದ್ರೆ ಸ್ಕೋರ್ ಬರಲ್ಲ — ಅದು ಕೆಟ್ಟ ಸ್ಕೋರ್ ಅಲ್ಲ, ಹಿಸ್ಟರಿ ಇಲ್ಲ ಅಷ್ಟೇ.
📩 ಯಾವ ಲೆಂಡರ್ ನಿಮ್ಮ ರಿಪೋರ್ಟ್ ತೆಗೆದರೂ ನಿಮಗೆ SMS/ಇಮೇಲ್ ಬರಬೇಕು. ನೀವು ಅಪ್ಲೈ ಮಾಡದೇ ಬಂದ್ರೆ ಎಚ್ಚರ.
RBI (26 Oct 2023): one Free Full Credit Report incl. score once a calendar year from each credit bureau, link on the bureau's home page; the bureau must alert you when a lender pulls your report. Four RBI-registered CICs. CIBIL free-score page (read 2 Nov 2026): score 300–900; free once per calendar year; no score without an active loan/card in the last 36 months.
ರಿಪೋರ್ಟ್‌ನ 5 ಭಾಗ
- Personal: ಹೆಸರು, ಹುಟ್ಟಿದ ದಿನ, PAN ಸರಿ ಇದೆಯಾ?
- Contact: ವಿಳಾಸ, ಫೋನ್
- Employment: ಕೆಲಸದ ವಿವರ
- Account (ಅತಿ ಮುಖ್ಯ): ಪ್ರತಿ ಲೋನ್, ಪ್ರತಿ ಕಾರ್ಡ್ ನಿಮ್ಮದಾ? ಮುಚ್ಚಿದ್ದು "Closed" ಅಂತ ಇದೆಯಾ? ತಡವಾದ ದಿನಗಳು ಸರಿಯಾ?
- Enquiry: ಕಳೆದ 36 ತಿಂಗಳಲ್ಲಿ ಯಾರು ನಿಮ್ಮ ರಿಪೋರ್ಟ್ ಕೇಳಿದ್ರು. ನೀವು ಅಪ್ಲೈ ಮಾಡದ ಲೆಂಡರ್ = ರೆಡ್ ಫ್ಲ್ಯಾಗ್ 🚩
CIBIL dispute sections: Personal, Contact, Employment, Account, Enquiry. The free report shows enquiries of the last 36 months and active + inactive accounts.
ಬ್ಯಾಂಕ್‌ಗಳು ಈಗ ತಿಂಗಳಿಗೆ 4 ಸಲ ಡೇಟಾ ಕಳಿಸ್ತಾವೆ
ಪ್ರತಿ ತಿಂಗಳ 9, 16, 23 ಮತ್ತು ಕೊನೆ ದಿನದ ಡೇಟಾ ಬ್ಯೂರೋಗೆ ಹೋಗುತ್ತೆ. ನೀವು ಕಟ್ಟಿದ್ದು ಬೇಗ ಅಪ್‌ಡೇಟ್ ಆಗುತ್ತೆ — ಆದ್ರೆ ಒಂದು EMI ತಡವಾದ್ರೂ ಬೇಗ ಕಾಣುತ್ತೆ.
RBI (CIC) Amendment Directions, 4 Dec 2025, in force 1 Jul 2026: lenders report as on the 9th, 16th, 23rd and last day of every month.
4 ಹಂತ, ಯಾವುದೇ ಫೀ ಇಲ್ಲ
- ಲಾಗಿನ್ ಆಗಿ ಇತ್ತೀಚಿನ ರಿಪೋರ್ಟ್ ಓಪನ್ ಮಾಡಿ (60 ದಿನದೊಳಗಿನ ರಿಪೋರ್ಟ್ ಮಾತ್ರ; ಹಳೆಯದಾದ್ರೆ ಮೊದಲು ಹೊಸದು ತಗೊಳ್ಳಿ)
- ತಪ್ಪು ಯಾವ ಭಾಗದಲ್ಲಿದೆ ಗುರುತಿಸಿ
- ಡಿಸ್ಪ್ಯೂಟ್ ಫಾರ್ಮ್‌ನಲ್ಲಿ ಆ ಭಾಗ ಆಯ್ಕೆ ಮಾಡಿ ದೂರು ಹಾಕಿ
- ಆಮೇಲೆ ಲಾಗಿನ್ ಆಗಿ ಸ್ಟೇಟಸ್ ಟ್ರ್ಯಾಕ್ ಮಾಡಿ
🔁 CIBIL ತಾನೇ ಡೇಟಾ ಬದಲಿಸಲ್ಲ — ನಿಮ್ಮ ದೂರು ಆ ಲೆಂಡರ್‌ಗೆ ಹೋಗುತ್ತೆ; ಲೆಂಡರ್ ಒಪ್ಪಿದ್ರೆ ರಿಪೋರ್ಟ್ ಸರಿ ಆಗುತ್ತೆ.
⏱️ ರೂಲ್ ಪ್ರಕಾರ 30 ದಿನದೊಳಗೆ ಪರಿಹಾರ; ತಡವಾದ್ರೆ ದಿನಕ್ಕೆ ₹100 ಪರಿಹಾರ ನಿಮ್ಮ ಹಕ್ಕು.
ಉದಾಹರಣೆ: 40 ದಿನ ಆದ್ರೂ ಆಗಿಲ್ಲ = 10 ದಿನ ತಡ = ₹1,000.
🔎 ಬ್ಯಾಂಕ್‌ಗಳು ಎಲ್ಲಾ 4 ಬ್ಯೂರೋಗೂ ಡೇಟಾ ಕಳಿಸ್ತಾವೆ — ಒಂದರಲ್ಲಿ ತಪ್ಪಿದ್ರೆ ಉಳಿದವೂ ನೋಡಿ.
CIBIL (read 2 Nov 2026): disputes are free; only reports from the past 60 days can be disputed; CIBIL routes the dispute to the lender. RBI Master Direction: resolve within 30 days, else ₹100 per calendar day compensation; lenders must report to all CICs. Dispute screens are behind login; ours are not shown.
ಈ ತಪ್ಪು ಮಾಡಬೇಡಿ
❌ "ಸ್ಕೋರ್ ಬೇಗ ಏರಿಸ್ತೀವಿ" ಅನ್ನೋ ಏಜೆಂಟ್‌ಗೆ ಹಣ ಕೊಡೋದು — ನಿಜವಾದ ತಪ್ಪನ್ನ ನೀವೇ ಫ್ರೀಯಾಗಿ ಸರಿ ಮಾಡಿಸಬಹುದು
❌ 60 ದಿನಕ್ಕಿಂತ ಹಳೆಯ ರಿಪೋರ್ಟ್‌ನಿಂದ ಡಿಸ್ಪ್ಯೂಟ್
❌ ಗೊತ್ತಿಲ್ಲದ enquiry / ಲೋನ್ ನೋಡಿ ಸುಮ್ಮನಿರೋದು
❌ ಕಮೆಂಟ್‌ನಲ್ಲಿ PAN ಹಾಕೋದು
🔒 OTP, PIN, ಪಾಸ್‌ವರ್ಡ್ ಯಾರಿಗೂ ಹೇಳಬೇಡಿ — ಬ್ಯಾಂಕ್, ಸರ್ಕಾರ ಯಾವತ್ತೂ ಫೋನ್‌ನಲ್ಲಿ ಕೇಳಲ್ಲ.
Never share your OTP, PIN or password with anyone.
ಈ ಚೆಕ್‌ಲಿಸ್ಟ್ ಬೇಕಾದ್ರೆ, "LEKKA" ಅಂತ ಕಮೆಂಟ್ ಮಾಡಿ 💬
How-to #3 Short ವೀಡಿಯೋ ಕೆಳಗೆ "LEKKA" ಅಂತ ಕಮೆಂಟ್ ಮಾಡಿ. ಸೇವ್ ಮಾಡಿ, ಬೇಕಾದವರಿಗೆ ಶೇರ್ ಮಾಡಿ. Short ಬರೋದು: WED 11 NOV · 1 PM.
Want this checklist? Comment "LEKKA" under the How-to #3 Short. Save it, and share it with whoever needs it. The Short is out WED 11 NOV · 1 PM IST.
ಇಷ್ಟ ಆಯ್ತಾ? ಇಲ್ಲಿ ಎಲ್ಲವೂ ಫ್ರೀ · Liked it? Everything here stays free.
ನಿಯಮಗಳು 6 Nov 2026 ರಂತೆ — ಪ್ರಕಟಿಸೋ ಮುನ್ನ ಮತ್ತೆ ಚೆಕ್ ಮಾಡಲಾಗಿದೆ · Rules as on 6 Nov 2026 — re-checked before publishing.
Sources: RBI circular of 26 Oct 2023 (free full credit report, alerts); RBI Master Direction on credit information reporting (30 days / ₹100 a day; list of CICs); RBI (CIC) Amendment Directions of 4 Dec 2025 (reporting 4 times a month from 1 Jul 2026); cibil.com free-score, dispute and FAQ pages (read 2 Nov 2026). Not affiliated with any credit bureau. Information only, not financial advice. Sample examples use made-up numbers. Not affiliated with any government department, bank or company named here.
📚 ಎಲ್ಲಾ How-to ಚೆಕ್‌ಲಿಸ್ಟ್ · All How-to checklists 🎁 ಎಲ್ಲಾ ಉಚಿತ ರಿಸೋರ್ಸ್ · All free resourcesಮಾಹಿತಿಗಾಗಿ ಮಾತ್ರ · ಸಲಹೆ ಅಲ್ಲ. Information only, not advice. Steps and portal names are from the official sites as read on the dates shown; for your own case, what the official portal shows is final.
ಫಾಲೋ ಮಾಡಿFollow Baduku Lekka
📩 Collabs: badukulekka@gmail.com
ಹೊಸ ವೀಡಿಯೋ ಅಪ್ಡೇಟ್ಗೆ ನಮ್ಮ WhatsApp Channel ಸೇರಿ
Join our WhatsApp Channel for new video updates