ನಿಮ್ಮ ಮನೆ/ಸೈಟ್‌ಗೆ e-ಖಾತಾ ಯಾವ ಪೋರ್ಟಲ್‌ನಲ್ಲಿ?E-KHATA VS E-SWATHU IN KANNADA · HOW-TO #6 · CHECKLIST
ನಿಮ್ಮ ಮನೆ/ಸೈಟ್‌ಗೆ e-ಖಾತಾ ಯಾವ ಪೋರ್ಟಲ್‌ನಲ್ಲಿ?
ಕರ್ನಾಟಕದಲ್ಲಿ ಆಸ್ತಿ ದಾಖಲೆಗೆ ಮೂರು ಪೋರ್ಟಲ್ ಇವೆ. ನಿಮ್ಮ ಆಸ್ತಿ ಯಾವ ಸ್ಥಳೀಯ ಸಂಸ್ಥೆಯ ಅಡಿ ಬರುತ್ತೆ ಅನ್ನೋದರ ಮೇಲೆ ಪೋರ್ಟಲ್ ನಿರ್ಧಾರ ಆಗುತ್ತೆ — PIN ಕೋಡ್ ಅಲ್ಲ. ತಪ್ಪು ಪೋರ್ಟಲ್‌ನಲ್ಲಿ ಹುಡುಕಿದ್ರೆ ನಿಮ್ಮ ಆಸ್ತಿ ಸಿಗೋದೇ ಇಲ್ಲ.
Karnataka has three property-record portals. Which one is yours depends on the local body your property falls under, not the PIN code. Every point below is from the official government portals.
📅 ನಿಯಮಗಳು 3 Nov 2026 ರಂತೆ · Rules as on 3 Nov 2026 (ಅಧಿಕೃತ ಮೂಲಗಳು · official sources). ಅರ್ಜಿ ಹಾಕೋ ಮುನ್ನ ಪೋರ್ಟಲ್‌ನಲ್ಲಿ ಮತ್ತೆ ಚೆಕ್ ಮಾಡಿ · Check the portal again before you apply.
ಬೆಂಗಳೂರು · ಪಟ್ಟಣ · ಹಳ್ಳಿ
🏙️ ಬೆಂಗಳೂರು (GBA ಪ್ರದೇಶ, ಹಳೆಯ BBMP): GBA ಇ-ಖಾತಾ
🏘️ ಬೆಂಗಳೂರಿನ ಹೊರಗಿನ ನಗರ / ಪಟ್ಟಣ (ನಗರಸಭೆ, ಪುರಸಭೆ…): ಇ-ಆಸ್ತಿ (ನಗರಾಭಿವೃದ್ಧಿ ಇಲಾಖೆ)
🌾 ಹಳ್ಳಿ / ಗ್ರಾಮ ಪಂಚಾಯಿತಿ ಪ್ರದೇಶ: ಇ-ಸ್ವತ್ತು 2.0 (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ)
📍 ಬೆಂಗಳೂರಿನ ಅಂಚಿನ ಕೆಲವು ಹಳೆಯ ಪಂಚಾಯಿತಿ (ಇ-ಸ್ವತ್ತು) ಆಸ್ತಿಗಳು ಈಗ GBA ಒಳಗಿವೆ; GBA ಪೋರ್ಟಲ್‌ನಲ್ಲಿ ಇ-ಸ್ವತ್ತು ಮಾಲೀಕರಿಗೇ ಒಂದು ವಿಭಾಗ ಇದೆ.
ℹ️ ಕಾವೇರಿ 2.0 ಆಸ್ತಿ ನೋಂದಣಿ (ಮಾರಾಟ/ಖರೀದಿ ರಿಜಿಸ್ಟ್ರೇಷನ್) ಪೋರ್ಟಲ್ — ಖಾತಾ ಪೋರ್ಟಲ್ ಅಲ್ಲ.
Bengaluru (GBA area, formerly BBMP) → GBA e-Khata; towns/cities outside Bengaluru → e-Aasthi (Urban Development Department); gram panchayat areas → e-Swathu 2.0 (RDPR). Some ex-panchayat properties are now inside GBA (the GBA portal has an e-Swathu owners' section). Kaveri 2.0 is the Stamps & Registration portal where a sale is registered; it is not a fourth khata portal.
GBA ಇ-ಖಾತಾ: Draft → Final
- gbaeaasthi.karnataka.gov.in → ನಾಗರಿಕರ ಲಾಗಿನ್ → ಮೊಬೈಲ್ ನಂಬರ್ + OTP
- ನಿಮ್ಮ ಆಸ್ತಿಯ Draft e-Khata ಹುಡುಕಿ (ವಾರ್ಡ್ → ಮಾಲೀಕರ ಹೆಸರು ಅಥವಾ assessment ನಂಬರ್)
- Final e-Khataಗೆ ರೆಡಿ ಇಡಿ (ಪೋರ್ಟಲ್ ಪಟ್ಟಿ): ನೋಂದಾಯಿತ ಪತ್ರ, ಮಾಲೀಕರ ಆಧಾರ್ eKYC, ಆಸ್ತಿ ತೆರಿಗೆ SAS ಅರ್ಜಿ ಸಂಖ್ಯೆ, ಆಸ್ತಿಯ ಫೋಟೋ, A-ಖಾತಾ ದಾಖಲೆಗಳು; ಕಟ್ಟಡ ಇದ್ರೆ BESCOM ವಿವರ; ಬೇಗ ಮಾರಾಟ ಮಾಡೋದಿದ್ರೆ ಮಾತ್ರ EC
- ಆನ್‌ಲೈನ್ ಅರ್ಜಿ → ePIDಯಿಂದ ಟ್ರ್ಯಾಕ್. ನೀವೇ, ಅಥವಾ ಬೆಂಗಳೂರು ಒನ್ / Local Youth Entrepreneur ಮೂಲಕ
- 💳 ಫೀ: ಪೋರ್ಟಲ್ ಸ್ಕ್ರೀನ್ ಮೇಲೆ ತೋರಿಸಿದಷ್ಟೇ, ಆನ್‌ಲೈನ್‌ನಲ್ಲಿ ಮಾತ್ರ. ಕ್ಯಾಶ್ ಇಲ್ಲ.
Citizen login with mobile + OTP; find your Draft e-Khata; documents for the Final e-Khata as listed on the portal (registered deed, Aadhaar eKYC, SAS property-tax application number, property photo, A-khata documents; BESCOM details if applicable; EC only if a sale is planned soon). The GBA portal is being upgraded to e-Khata 2.0, so buttons may change.
GBA ಇ-ಖಾತಾ ಪೋರ್ಟಲ್ GBA ಇ-ಖಾತಾ FAQಇ-ಆಸ್ತಿ: ಬೆಂಗಳೂರಿನ ಹೊರಗಿನ ನಗರ, ಪಟ್ಟಣ
- eaasthi.karnataka.gov.in → "ಇ-ಆಸ್ತಿ ತಂತ್ರಾಂಶದಲ್ಲಿ ಇ-ಖಾತಾ ಪಡೆಯಲು ಅರ್ಜಿ" → ಮೊಬೈಲ್ ನಂಬರ್ → ಒಟಿಪಿ ಪಡೆಯಿರಿ
- ಅರ್ಜಿ ತುಂಬಿ, ದಾಖಲೆ ಅಪ್‌ಲೋಡ್ ಮಾಡಿ
- ಸ್ಟೇಟಸ್: ಹೋಮ್ ಪೇಜ್‌ನ Application status
Citizen application with mobile OTP; track it under Application status.
ಇ-ಆಸ್ತಿ ಅರ್ಜಿ · Citizen loginಇ-ಸ್ವತ್ತು: ಗ್ರಾಮ ಪಂಚಾಯಿತಿ ಆಸ್ತಿ
- eswathu.karnataka.gov.in → ನಾಗರಿಕ ಲಾಗಿನ್ → ಮೊಬೈಲ್ ನಂಬರ್ — ಅಥವಾ ಗ್ರಾಮ ಒನ್ ಸೆಂಟರ್
- ಬಾಕಿ ಪಂಚಾಯಿತಿ ತೆರಿಗೆ ಇದ್ರೆ ಮೊದಲು ಕಟ್ಟಬೇಕು
- ಫಾರ್ಮ್ 11A, ಅಥವಾ ಕೆಳಗಿನ ಗೆಜೆಟ್ ಪ್ರಕಾರ ಫಾರ್ಮ್ 11Bಗೆ ಅರ್ಜಿ
- ಸ್ಟೇಟಸ್: "ಆಸ್ತಿಯ ಸ್ಥಿತಿಯನ್ನು ಪರಿಶೀಲಿಸಿ" → Property ID (ಲಾಗಿನ್ ಬೇಕಿಲ್ಲ)
📜 8 ಅಕ್ಟೋಬರ್ 2026ರ ಕರ್ನಾಟಕ ಗೆಜೆಟ್ — ಹಳ್ಳಿ (ಇ-ಸ್ವತ್ತು) ಆಸ್ತಿಗೆ ಮಾತ್ರ
ಕರ್ನಾಟಕ ರಾಜ್ಯಪತ್ರ (ವಿಶೇಷ) ಭಾಗ IVA, ಸಂಖ್ಯೆ 1066 · ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಸೂಚನೆ RDPR 622 GPA 2026. ಇದು ಗ್ರಾಮ ಪಂಚಾಯಿತಿ ನಿಯಮಗಳ ತಿದ್ದುಪಡಿ; ಬೆಂಗಳೂರು GBA ಇ-ಖಾತಾ ಅಥವಾ ಪಟ್ಟಣದ ಇ-ಆಸ್ತಿಗೆ ಅನ್ವಯಿಸಲ್ಲ.
- 🏠 7 ಏಪ್ರಿಲ್ 2025ಕ್ಕೆ ಮುಂಚೆ ಇದ್ದ ಮನೆ/ಸೈಟ್, ಪಂಚಾಯಿತಿ ಸರ್ವೆಯಲ್ಲಿ ಬಿಟ್ಟುಹೋಗಿದ್ರೆ: ಇ-ಸ್ವತ್ತುನಲ್ಲಿ ಫಾರ್ಮ್ 11B
- 📄 ನೋಂದಾಯಿತ ದಾಖಲೆ ಇಲ್ಲದೆ ಫಾರ್ಮ್ 11A: 7 ಏಪ್ರಿಲ್ 2025ಕ್ಕೆ ಮುಂಚಿನ ಕಟ್ಟಡಗಳಿಗೆ ಮಾತ್ರ, ಕಟ್ಟಡ + ಪಕ್ಕದ ಜಾಗ ಸೇರಿ 4,000 ಚದರಡಿ ಮೀರಬಾರದು
- ⏱️ ನಿಯಮದ ಸಮಯ ಮಿತಿ 22 ಕೆಲಸದ ದಿನ (ಇದು ನಿಯಮದ ಮಿತಿ, ಗ್ಯಾರಂಟಿ ಅಲ್ಲ)
- 📢 ಅರ್ಜಿ ಮೇಲೆ 7 ದಿನದ ಸಾರ್ವಜನಿಕ ಆಕ್ಷೇಪಣೆ ನೋಟೀಸ್, ನಂತರ ದಾಖಲೆ/ಸ್ಥಳ ಪರಿಶೀಲನೆ
- ⚠️ ಕೆಲವು 11B ದಾಖಲೆಗಳಲ್ಲಿ "ಪರಭಾರೆಗೆ ಅವಕಾಶ ಇಲ್ಲ" ಅಂತ ಇರುತ್ತೆ — ಖರೀದಿ ಮುನ್ನ ಚೆಕ್ ಮಾಡಿ
Karnataka Gazette (Extraordinary) Part IVA No. 1066, 08-10-2026, Notification RDPR 622 GPA 2026 (Rural Development & Panchayat Raj Dept), amending the Gram Panchayat taxes/fees rules. Village (e-Swathu) property only. Official copy: erajyapatra.karnataka.gov.in → search → Extra Ordinary → Part IVA → 08-Oct-2026 → No. 1066 (the site has no direct link).
ಗೆಜೆಟ್ PDF (ಅಧಿಕೃತ ಪ್ರತಿ) · Gazette PDF e-Rajyapatra (official Gazette)ಫ್ರೀ ಚೆಕ್: "ಈ ಆಸ್ತಿ ನೋಂದಣಿ ಆಗುತ್ತಾ?"
ಮೂರೂ ಪೋರ್ಟಲ್‌ನಲ್ಲಿ ಈ ಚೆಕ್ ಇದೆ:
✅ GBA: "ಆಸ್ತಿಯನ್ನು ನೋಂದಾಯಿಸಬಹುದೇ ಎಂದು ಪರಿಶೀಲಿಸಿ" → ePID. ಉಪ-ನೋಂದಣಾಧಿಕಾರಿ ಕಚೇರಿಗೆ ಸಿಗೋದೂ ಇದೇ ಚೆಕ್.
✅ ಇ-ಆಸ್ತಿ: "ಕಾವೇರಿ ನೋಂದಣಿ ಅರ್ಹತೆ ಪರಿಶೀಲಿಸಿ"
✅ ಇ-ಸ್ವತ್ತು: "ಈ ಆಸ್ತಿ ನೋಂದಣಿ ಮಾಡಬಹುದು ಎಂಬುದನ್ನು ಪರಿಶೀಲಿಸಿ" → Property ID
📑 GBAನಲ್ಲಿ Final e-Khata "non-transactable" ಆಗಿದ್ರೆ EC ಅಪ್‌ಲೋಡ್ ಆಯ್ಕೆ ಇದೆ; ಪ್ರಿಂಟ್ ಆದ Form A / B ಆನ್‌ಲೈನ್‌ನಲ್ಲಿ verify ಮಾಡಬಹುದು.
All three portals have a free "can this property be registered" check: GBA (by ePID; the Sub-Registrar's office gets the same check), e-Aasthi (Kaveri registration eligibility) and e-Swathu (by Property ID).
ಈ 3 ತಪ್ಪು ಮಾಡಬೇಡಿ
❌ ಮಧ್ಯವರ್ತಿಗೆ ಹಣ — GBA ಪ್ರಕಾರ ಅದು ಸಂಪೂರ್ಣ ಅನಗತ್ಯ
❌ ಕ್ಯಾಶ್ ಪೇಮೆಂಟ್
❌ ಖಾತಾ ಈಗಾಗಲೇ ಇದ್ರೂ "ಹೊಸ ಖಾತಾ"ಗೆ ಅರ್ಜಿ — GBA ಪ್ರಕಾರ ಕ್ರಿಮಿನಲ್ ಕ್ರಮ ಆಗಬಹುದು
⏳ ಪೋರ್ಟಲ್ ನಿಧಾನ ಆದ್ರೆ ಸ್ವಲ್ಪ ಹೊತ್ತಿನ ನಂತರ ಮತ್ತೆ ಪ್ರಯತ್ನಿಸಿ ಅಥವಾ ಹೆಲ್ಪ್‌ಲೈನ್‌ಗೆ ಕಾಲ್ ಮಾಡಿ
GBA FAQ: "Paying money to middlemen is completely unnecessary". GBA new-khata page: applying for a new khata despite an existing khata is liable for criminal action.
🔒 OTP, PIN, ಪಾಸ್‌ವರ್ಡ್ ಯಾರಿಗೂ ಹೇಳಬೇಡಿ — ಬ್ಯಾಂಕ್, ಸರ್ಕಾರ ಯಾವತ್ತೂ ಫೋನ್‌ನಲ್ಲಿ ಕೇಳಲ್ಲ.
Never share your OTP, PIN or password with anyone.
☎️ ಹೆಲ್ಪ್‌ಲೈನ್ · Helplines: GBA ಇ-ಖಾತಾ 94806 83695 · ಇ-ಸ್ವತ್ತು 9483476000 (ಸೋಮ–ಶನಿ, 2ನೇ/4ನೇ ಶನಿವಾರ ಬಿಟ್ಟು, 10:00–5:30) · ಇ-ಆಸ್ತಿ 7259585959
▶ E-Khata vs E-Swathu in Kannada
ಪೂರ್ತಿ ವಿಡಿಯೋ SAT 14 NOV · 7 PM · Short SAT 14 NOV · 8 PM.
🔔 ಪೂರ್ತಿ ವಿಡಿಯೋ: SAT 14 NOV · 7 PM · Subscribe 🔔 Short: SAT 14 NOV · 8 PM · Subscribe Instagram Reel Facebook Reelನಿಯಮಗಳು 3 Nov 2026 ರಂತೆ (ಅಧಿಕೃತ ಮೂಲಗಳು) · Rules as on 3 Nov 2026 (official sources).
Sources: official government portals only — GBA e-Khata, e-Aasthi, e-Swathu 2.0, Kaveri 2.0 and their FAQs (read 2 Nov 2026), and the Karnataka Gazette (e-Rajyapatra) No. 1066 of 8 Oct 2026. Educational information, not legal advice; for a big purchase, take a lawyer's advice. Not affiliated with any government department, bank or company named here.
📚 ಎಲ್ಲಾ How-to ಚೆಕ್‌ಲಿಸ್ಟ್ · All How-to checklists 🎁 ಎಲ್ಲಾ ಉಚಿತ ರಿಸೋರ್ಸ್ · All free resourcesಫಾಲೋ ಮಾಡಿFollow Baduku Lekka
📩 Collabs: badukulekka@gmail.com
ಹೊಸ ವೀಡಿಯೋ ಅಪ್ಡೇಟ್ಗೆ ನಮ್ಮ WhatsApp Channel ಸೇರಿ
Join our WhatsApp Channel for new video updates